Index   ವಚನ - 1612    Search  
 
ವೇದ ಘನವೆಂಬೆನೆ? ವೇದ ವೇಧಿಸಲರಿಯದೆ ಕೆಟ್ಟವು. ಶಾಸ್ತ್ರ ಘನವೆಂಬೆನೆ? ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು. ಪುರಾಣ ಘನವೆಂಬೆನೆ? ಪುರಾಣ ಪೂರೈಸಲರಿಯದೆ ಕೆಟ್ಟವು. ಆಗಮ ಘನವೆಂಬೆನೆ? ಆಗಮ ಅರಸಲರಿಯದೆ ಕೆಟ್ಟವು. ಅದೇನು ಕಾರಣವೆಂದಡೆ: ವೇದ ಶಾಸ್ತ್ರ ಪುರಾಣಾಗಮಂಗಳೆಲ್ಲ, ತಮ್ಮ ತನುವಿಡಿದು ಅರಸಲರಿಯವು. ಇದಿರಿಟ್ಟುಕೊಂಡು ಕಡೆಹೋದ, ನರಲೋಕದ ನರರುಗಳರಿಯರು, ಸುರಲೋಕದ ಸುರರುಗಳರಿಯರು, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣನೇ ಬಲ್ಲ.