Index   ವಚನ - 1613    Search  
 
ವೇದಪ್ರಿಯನೆಂಬೆನೆ ನಮ್ಮ ದೇವ? ವೇದಪ್ರಿಯನಲ್ಲ. ನಾದಪ್ರಿಯನೆಂಬೆನೆ ನಮ್ಮ ದೇವ? ನಾದಪ್ರಿಯನಲ್ಲ. ಭೋಗಪ್ರಿಯನೆಂಬೆನೆ ನಮ್ಮ ದೇವ? ಭೋಗಪ್ರಿಯನಲ್ಲ. ತುತ್ತುಪ್ರಿಯನೆಂಬೆನೆ ನಮ್ಮ ದೇವ? ತುತ್ತುಪ್ರಿಯನಲ್ಲ. ಮನದ ಭಕ್ತಿಪ್ರಿಯ ಕಾಣಾ, ಕೂಡಲಚೆನ್ನಸಂಗಮದೇವಾ.