ಶಕ್ತಿಯು ಸೂಕ್ಷ್ಮವೆಂದು ಸ್ಥೂಲವೆಂದು ಇತ್ತೆರನಾಗಿರ್ಪುದು.
ಸೂಕ್ಷ್ಮಶಕ್ತಿಯ ಪರಿಣಾಮ ದೃಗ್ಗೋಚರವಾಗದು.
ಸ್ಥೂಲಶಕ್ತಿಯ ಪರಿಣಾಮ ಪ್ರತ್ಯಕ್ಷವಾಗಿ ಪರಿಣಮಿಸುತಿರ್ಪುದು.
ಇವುಗಳಲ್ಲಿ ಸೂಕ್ಷ್ಮಶಕ್ತಿಯ ವಿವರವೆಂತೆಂದಡೆ:
ಪ್ರಾಣಿಗಳ ಪುರಸ್ಕಾರದಿಂದ ಪುಣ್ಯವು,
ತಿರಸ್ಕಾರದಿಂದ ಪಾಪವು, ಅದೃಷ್ಟವಾಗಿರುವ ಪರಿಯಂತೆ;
ಕಾಲವು ಅಮೂರ್ತವಾಗಿ
ಪತ್ರಪುಷ್ಪಾದಿ ಮೂರ್ತವಸ್ತುಗಳಿಗೆ ಕಾರಣವಾಗಿರ್ಪಂತೆ,
ಮಂತ್ರಪ್ರಯೋಗದಿಂದ ಉರಗನ ಗರಳವು ಹರಣವಾದಂತೆ,
ನಿಮಗರ್ಪಿತ ಪ್ರಸಾದಪರಿಣಾಮದ ಸೂಕ್ಷ್ಮಶಕ್ತಿಯಿಂದ
ಅನಿಷ್ಟನಿವೃತ್ತಿ ಇಷ್ಟಾರ್ಥಪ್ರಾಪ್ತಿಗಳಾಗುತ್ತಿರ್ಪವಯ್ಯಾ,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Śaktiyu sūkṣmavendu sthūlavendu itteranāgirpudu.
Sūkṣmaśaktiya pariṇāma dr̥ggōcaravāgadu.
Sthūlaśaktiya pariṇāma pratyakṣavāgi pariṇamisutirpudu.
Ivugaḷalli sūkṣmaśaktiya vivaraventendaḍe:
Prāṇigaḷa puraskāradinda puṇyavu,
tiraskāradinda pāpavu, adr̥ṣṭavāgiruva pariyante;
kālavu amūrtavāgi
patrapuṣpādi mūrtavastugaḷige kāraṇavāgirpante,
mantraprayōgadinda uragana garaḷavu haraṇavādante,
Nimagarpita prasādapariṇāmada sūkṣmaśaktiyinda
aniṣṭanivr̥tti iṣṭārthaprāptigaḷāguttirpavayyā,
kūḍalacennasaṅgamadēvā.