Index   ವಚನ - 1622    Search  
 
ಶಬ್ದಾದಿ ವಿಷಯಂಗಳ ವಿವರವು: ಶಬ್ದ ಆಕಾಶದ ಗುಣ, ಶಬ್ದ ಸ್ಪರ್ಶ ವಾಯುವಿನ ಗುಣ. ಶಬ್ದ ಸ್ಪರ್ಶ ರೂಪು ಅಗ್ನಿಯ ಗುಣ, ಶಬ್ದ ಸ್ಪರ್ಶ ರೂಪು ರಸ ಅಪ್ಪುವಿನ ಗುಣ, ಶಬ್ದ ಸ್ಪರ್ಶ ರೂಪು ರಸ ಗಂಧ ಸಹಿತ ಇವೈದು ಪೃಥ್ವಿಯ ಗುಣ. ಇಂತೀ ಪಂಚಗುಣವನು ಒಂದೇ ಗುಣವ ಮಾಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು.