Index   ವಚನ - 1624    Search  
 
ಶರಣಂಗೆ ಆಕಾಶವೆ ಅಂಗ, ಆ ಅಂಗಕ್ಕೆ ಸುಜ್ಞಾನವೆ ಹಸ್ತ, ಆ ಹಸ್ತಕ್ಕೆ ಶಿವಸಾದಾಖ್ಯ, ಆ ಸಾದಾಖ್ಯಕ್ಕೆ ಪರಾಶಕ್ತಿ, ಆ ಶಕ್ತಿಗೆ ಪ್ರಸಾದವೆ ಲಿಂಗ, ಆ ಲಿಂಗಕ್ಕೆ ಶಾಂತ್ಯತೀತವೆ ಕಳೆ, ಆ ಕಳೆಗೆ ಶ್ರೋತ್ರೇಂದ್ರಿಯವೆ ಮುಖ, ಆ ಮುಖಕ್ಕೆ ಸುಶಬ್ದದ್ರವ್ಯಂಗಳನು, ರೂಪು ರುಚಿ ತೃಪ್ತಿಯನರಿದು ಆನಂದಭಕ್ತಿಯಿಂದರ್ಪಿಸಿ, ಆ ಸುಶಬ್ದಪ್ರಸಾದವ ಭೋಗಿಸಿ ಸುಖಿಸುತ್ತಿಹನು ಕೂಡಲಚೆನ್ನಸಂಗಾ, ನಿಮ್ಮ ಶರಣ.