Index   ವಚನ - 1659    Search  
 
ಶೀಲ ಶೀಲವೆಂಬರು ನಾವಿದನರಿಯೆವಯ್ಯಾ. ಮಾಡಿದ ಮನೆ ಹೂಡಿದ ಒಲೆ ಅಟ್ಟುಂಬ ಮಡಕೆ ಕಟ್ಟಿದ ಕೆರೆ ಬಿತ್ತಿದ ಬೆಳೆಗೆ ಶೀಲವುಂಟೆ? ಅಪ್ಪಟ ಶೀಲವಿಲ್ಲದೆ ಮಾಡಿದ ಮನೆ ಪರಪಾಕ, ಹೂಡಿದ ಒಲೆ ಪರಪಾಕ, ಅಟ್ಟುಂಬ ಮಡಕೆ ಪರಪಾಕ, ಕಟ್ಟಿದ ಕೆರೆ ಪರಪಾಕ, ಬಿತ್ತಿದ ಬೆಳೆ ಹದಿನೆಂಟು ಧಾನ್ಯ ಪರಪಾಕ. ಶೀಲವಿನ್ನಾವುದೆಂದರೆ; ಅಶನ ವಸನ ಹಸಿವು ನಿದ್ರೆ ನೀರಡಿಕೆ ಬಿಟ್ಟು ಕೂಡಲಚೆನ್ನಸಂಗಮದೇವ ನೀ ಸಾಕ್ಷಿಯಾಗಿ.