Index   ವಚನ - 1660    Search  
 
ಶೀಲಶೀಲವೆಂಬರು ಶೀಲ ಭಕ್ತಿಯೊಳಗಿಲ್ಲ ಅದೇನು ಕಾರಣವೆಂದರೆ: ಧ್ಯಾನ ಧರಣಿಯೆಂಜಲು, ಅಗ್ಘಣಿ ಮೇಘದೆಂಜಲು, ಪರಿಮಳ ವಾಯುವಿನೆಂಜಲು, ಪಾಕ ಅಗ್ನಿಯೆಂಜಲು, ಕೈಯ್ಯೊಳಗೆ ಸೊಡರ ಪಿಡಿದು ಕಣ್ಣಕಾಣದೆ ಎಡವಿ ಬೀಳುವ ಕುಟಿಲಶೀಲರ ಮೆಚ್ಚುವನೆ ಕೂಡಲಚೆನ್ನಸಂಗಮದೇವ?