ಶ್ರೀಗುರು ಶಿಷ್ಯಂಗೆ ಅನುಗ್ರಹ ಮಾಡಿದ ಕ್ರಮವೆಂತೆಂದಡೆ:
'ಲಿಂಗ, ಜಂಗಮ, ಪಾದೋದಕ, ಪ್ರಸಾದ-
ಇಂತು ಚತುರ್ವಿಧ ಲಂಪಟನಾಗೈ ಮಗನೆ' ಎಂದು
ಅಂಗದ ಮೇಲೆ ಲಿಂಗಸಾಹಿತ್ಯವ ಮಾಡಿ,
'ಹುಸಿ ಕಳವು ವೇಶ್ಯಾಗಮನ ಪಾರದ್ವಾರ
ಪರದ್ರವ್ಯ ಪರನಿಂದೆ ಪರದೋಷ:
ಇಂತೀ ಸಪ್ತಗುಣ ವಿರಹಿತನಾಗಿ, ಅನ್ಯಭವಿನಾಸ್ತಿಯಾಗಿ
ಮಜ್ಜನಕ್ಕೆರೆವುದು ಶಿವಪಥ ಕಂಡಾ ಮಗನೆ'
ಎಂದು ಹೇಳಿಕೊಟ್ಟ ಉಪದೇಶವನೆ
ಕೇಳಿ ನಡೆಯ ಬಲ್ಲಡೆ
ಆತನೆ ಶಿಷ್ಯ ಆತನೆ ನಿತ್ಯಮುಕ್ತನು.
ಆ ಗುರುಶಿಷ್ಯರಿಬ್ಬರು ನಿಮ್ಮೊಳಗೆರಕವು-ಅದಂತಿರಲಿ,
ಅದು ಉಪಮಿಸಬಾರದ ಘನವು, ಅದಕ್ಕೆ ಶರಣಾರ್ಥಿ.
ಇನಿತಲ್ಲದೆ ಕೊಡುವ ಕೊಂಬ ಗುರುಶಿಷ್ಯರಿಬ್ಬರಿಗೂ
ಯಮದಂಡನೆ ಕಾಣಾ, ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Śrīguru śiṣyaṅge anugraha māḍida kramaventendaḍe:
'Liṅga, jaṅgama, pādōdaka, prasāda-
intu caturvidha lampaṭanāgai magane' endu
aṅgada mēle liṅgasāhityava māḍi,
'husi kaḷavu vēśyāgamana pāradvāra
paradravya paraninde paradōṣa:
Intī saptaguṇa virahitanāgi, an'yabhavināstiyāgi
majjanakkerevudu śivapatha kaṇḍā magane'
endu hēḷikoṭṭa upadēśavane
Kēḷi naḍeya ballaḍe
ātane śiṣya ātane nityamuktanu.
Ā guruśiṣyaribbaru nim'moḷagerakavu-adantirali,
adu upamisabārada ghanavu, adakke śaraṇārthi.
Initallade koḍuva komba guruśiṣyaribbarigū
yamadaṇḍane kāṇā, kūḍalacennasaṅgamadēvā.