Index   ವಚನ - 1697    Search  
 
ಸತ್ಕ್ರಿಯಾಸಮ್ಯಗ್‍ಜ್ಞಾನಸಂಪನ್ನರಪ್ಪ ಶಿವಯೋಗಿಗಳೆಡೆಯಾಡಿದ ನೆಲವೆ ಸುಕ್ಷೇತ್ರವಯ್ಯಾ. ಅವರಡಿಯಿಟ್ಟ ಜಲವೆ ಶುಭತೀರ್ಥವಯ್ಯಾ. ಸಕಲತೀರ್ಥಕ್ಷೇತ್ರವೆಲ್ಲ ಶಿವಯೋಗಿಯ ಶ್ರೀಪಾದದಲ್ಲಿ ಅಡಗಿಪ್ಪವಯ್ಯಾ. "ಜ್ಞಾನಯೋಗಪರಾಣಾಂ ತು ಪಾದಪ್ರಕ್ಷಾಲಿತಂ ಜಲಂ| ಭಾವಶುದ್ಧ್ಯರ್ಥಮಜ್ಞಾನಾಂ ತತ್ತೀರ್ಥಂ ಮುನಿಪುಂಗವ"|| ಎಂದುದಾಗಿ ಶಿವಯೋಗಿಯ ಪಾದೋದಕವ ಸೇವಿಸಿ ನಮ್ಮ ಶರಣರೆಲ್ಲ ಪರಮುಕ್ತರಾದರಯ್ಯಾ, ಕೂಡಲಚೆನ್ನಸಂಗಮದೇವಾ.