Index   ವಚನ - 1701    Search  
 
ಸಮಯವಿರೋಧವಾದೀತೆಂದು ಪಾದಾರ್ಚನೆಯ ಮಾಡುವರಯ್ಯಾ. ಲಿಂಗಜಂಗಮಕ್ಕೆ ಪಾದವಾವುದು? ಅರ್ಚನೆ ಯಾವುದು? ಎಂಬ ತುದಿ ಮೊದಲನರಿಯರು. ಉದಾಸೀನದಿಂದ ಪಾದಾರ್ಚನೆಯ ಮಾಡಿ, ಪಾದೋದಕ ಧರಿಸಿದಡೆ ಅದೇ ಪ್ರಳಯಕಾಲಜಲ. ವರ್ಮವನರಿದು ಕೊಂಡಡೆ ತನ್ನ ಭವಕ್ಕೆ ಪ್ರಳಯಕಾಲಜಲ! ಈ ಉಭಯವ ಭೇದಿಸಿ ಸಂಸಾರಮಲಿನವ ತೊಳೆವಡೆ ಕೂಡಲಚೆನ್ನಸಂಗಾ ಈ ಅನುವ ನಿಮ್ಮ ಶರಣ ಬಲ್ಲ.