Index   ವಚನ - 1721    Search  
 
ಸೂಳೆಯ ಮಗ ಮಾಳವಪಾಳ್ಯದೊಳಗೆಲ್ಲಾ, ತಮ್ಮಪ್ಪನ ಕಾಣದೆ ಅರಸುತೈದಾನೆ. ಆಳೆಂದರಿಯ, ಅರಸೆಂದರಿಯ. "ಬಹುಲಿಂಗಪೂಜಕಶ್ಚೈವ ಬಹುಭಾವಗುರುಸ್ತಥಾ| ಬಹುಪ್ರಸಾದಂ ಭುಂಜತೇ ವೇಶ್ಯಾಪುತ್ರಸ್ತಥೈವ ಚ"|| ಎಂದುದಾಗಿ, ಮತಿಹೀನ ಕಾಳಮೂಳರಿಗೆ ಶಿವಭಕ್ತಿ ದೊರೆಯದು, ಆಣೆ ನಿಮ್ಮಾಣೆ ಕೂಡಲಚೆನ್ನಸಂಗಮದೇವಾ.