Index   ವಚನ - 1722    Search  
 
ಸೃಷ್ಟಿಯ ಮೇಲಣ ಕಣಿಯ ತಂದು, ಅಷ್ಟತನುವಿನ ಕೈಯಲ್ಲಿ ಕೊಟ್ಟು ಪೂಜಿಸು ಪೂಜಿಸು ಎಂಬರಯ್ಯಾ. ನಾಲ್ವರಿಗೆ ಹುಟ್ಟಿದ ಲಿಂಗವ ನಾನೆತ್ತ ಪೂಜಿಸುವೆನಯ್ಯಾ. ಪೃಥ್ವಿಗೆ ಹುಟ್ಟಿ ಶಿಲೆಯಾಯಿತ್ತು, ಕಲ್ಲುಕುಟಿಗನ ಕೈಯಲ್ಲಿ ರೂಪಾಯಿತ್ತು. ಗುರುವಿನ ಹಸ್ತದಲ್ಲಿ ಮೂರ್ತಿಯಾಯಿತ್ತು, ಉಪಚಾರಕ್ಕೆ ದೇವರಾಯಿತ್ತು. ಈ ನಾಲ್ವರಿಗೆ ಹುಟ್ಟಿದ ಲಿಂಗವ ನಾನೆತ್ತ ಪೂಜಿಸುವೆನಯ್ಯಾ. ಈ ಲಿಂಗ ನೆಲಕ್ಕೆ ಬಿದ್ದರೆ ಸಮಾಧಿಯ ಹೊಕ್ಕೇನೆಂಬರು. 'ಸಮಾಧಿ ಶಸ್ತ್ರಂ ಚ ಶಿಲಾದಾನಾದಿಂ ಚ' ಈ ಆರು ತೆರದಲ್ಲಿ ಸತ್ತನಾದರೆ ಕುಂಭೀಪಾತಕ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ.