Index   ವಚನ - 1739    Search  
 
ಹಸಿವು ಹರಿದು, ತೃಷೆ ಬತ್ತಿ, ಪರಿಣಾಮವೆ ಪಥ್ಯವಾಗಿ ನಿಂದಂಗ ನೀನಾದ ಕಾರಣ, ನಿನ್ನ ಕಾರುಣ್ಯಚಕ್ಷು ಎನ್ನ ನಿರೀಕ್ಷಿಸಿದಲ್ಲಿ, ಎನ್ನ ಬಂಧ ಮೋಕ್ಷವೆಂಬುವು ಅಂದೆ ನಿಂದವು. ಕೂಡಲಚೆನ್ನಸಂಗಮದೇವರಲ್ಲಿ ಪ್ರಭುದೇವರ ಸುಳುಹು ಗೋಪ್ಯವಾಯಿತ್ತು.