ವೇದಂಗಳ ನಾಲ್ಕು ಭೇದಿಸಲರಿಯದೆ,
ಹದಿನಾರು ಶಾಸ್ತ್ರ ನಿಮ್ಮ ಶಾಂತಿಯನರಿಯದೆ,
ಇಪ್ಪತ್ತೆಂಟು ಪುರಾಣ ನಿಮ್ಮ ಪುಣ್ಯದ ಪುಂಗವನರಿಯದೆ,
ತೊಳಲಿ ಬಳಲುವುದಕ್ಕೆ [ಚ]ರ್ಚೆಯ ಮಾಡಿದೆ.
ನಾ ಕೆಟ್ಟೆ, ಹುಚ್ಚುಗೊಂಡ ನಾಯಿ ಒಡೆಯನ ಕಚ್ಚಿದಂತೆ, ಕೆಟ್ಟೆ.
ಆಗಮಗಳಲ್ಲಿ ಹೋರಿ, ದೃಷ್ಟವ ಕಾಣದೆ ಹೊತ್ತುಹೋರಿದೆನಯ್ಯಾ.
ತಿರುಗುವ ಮೃಗವ ಎಚ್ಚಂತೆ, ಎನಗದು ಕುರುಹಾಯಿತ್ತು,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
Art
Manuscript
Music
Courtesy:
Transliteration
Vēdaṅgaḷa nālku bhēdisalariyade,
hadināru śāstra nim'ma śāntiyanariyade,
ippatteṇṭu purāṇa nim'ma puṇyada puṅgavanariyade,
toḷali baḷaluvudakke [ca]rceya māḍide.
Nā keṭṭe, huccugoṇḍa nāyi oḍeyana kaccidante, keṭṭe.
Āgamagaḷalli hōri, dr̥ṣṭava kāṇade hottuhōridenayyā.
Tiruguva mr̥gava eccante, enagadu kuruhāyittu,
enna gūḍina gum'maṭanoḍeya agamyēśvaraliṅga.