Index   ವಚನ - 40    Search  
 
ನಾನೆಂಬುದೆ ಸಕಲ, ನೀನೆಂಬುದೆ ಪ್ರತಿರೂಪು. ನಾ ನೀನೆಂಬುದು ಅರತುದೆ ನಿಃಕಲ. ಕಂಡೆಹೆನೆಂಬುದಕ್ಕೆ ಸಂದೇಹ. ಕಾಣದೆ ಏನೂ ಎನ್ನದಿದ್ದುದು ಭಾವಕ್ಕೆ ವಿರೋಧ. ಕ್ರೀಯಿಂದ ಕಾಬಡೆ ಮಲಸಂಬಂಧಿ. ನಿಃಕ್ರೀಯಿಂದ ಕಾಬುದಕ್ಕೆ, ಅರಿವ ಮನಕ್ಕೆ ಕುರುಹಿಲ್ಲ. ಇಂತಿದ ಏನುವೆನ್ನದ ಲಿಂಗವೇ ಇದ್ದೇನೆಂದು ಕೊಟ್ಟೆ, ಸಾಕಾರದ ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ?