Index   ವಚನ - 41    Search  
 
ಶೈವಂಗೆ ಹರವರಿ, ನೇಮಸಂಗೆ ಊಧ್ರ್ವ ಬೌದ್ಧಂಗೆ ವರ್ತುಳ, ಇದಿರಿಡದವಂಗೆ ಹಣೆಯಲ್ಲಿ ಇಡಲಿಲ್ಲ. ಇಂತಿವೆಲ್ಲವೂ ದರುಶನವಾದ ಸಂಬಂಧಿಗಳು, ಉಂಟು ಇಲ್ಲಾ ಎಂಬುದಕ್ಕೆ ಇರಿಸಿಹೋದ ಮೂವರಿಗೆ. ಮೂರನರಿತು ಮೀರಿದವಂಗೆ ಏನೂ ತೋರಲಿಲ್ಲ. ತೊಗಲಗುಡಿಯೊಳಗೇಕೆ ಅಡಿಗಿದೆ, ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ?