ಕಾಯಸೂತಕವಳಿದು ಜೀವದ ಭವ ಹಿಂಗಿ,
ಜ್ಞಾನಗುರು ಕೊಟ್ಟ ಭಾವದ ಲಿಂಗವಿರೆ,
ಮತ್ತೇನನು ನೋಡಲೇಕೆ?
ಗಂಡನುಳ್ಳವಳಿಗೆ ಮತ್ತೊಬ್ಬ ಬಂದಡೆ ಚಂದವುಂಟೆ?
ಅದರಂಗ ನಿಮಗಾಯಿತ್ತು.
ಲಿಂಗವಿದ್ದಂತೆ ಜೀವಿಗಳ ಅಂಗವ ನೋಡಿ
ಬದುಕಿಹೆನೆಂಬ ಭಂಡರಿಗೇಕೆ?
ಗುಡಿಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗ
ಅವರ ಬಲ್ಲನಾಗಿ ಒಲ್ಲ.
Art
Manuscript
Music
Courtesy:
Transliteration
Kāyasūtakavaḷidu jīvada bhava hiṅgi,
jñānaguru koṭṭa bhāvada liṅgavire,
mattēnanu nōḍalēke?
Gaṇḍanuḷḷavaḷige mattobba bandaḍe candavuṇṭe?
Adaraṅga nimagāyittu.
Liṅgaviddante jīvigaḷa aṅgava nōḍi
badukihenemba bhaṇḍarigēke?
Guḍiya gum'maṭanāthanalli agamyēśvaraliṅga
avara ballanāgi olla.