Index   ವಚನ - 66    Search  
 
ಶಿಲೆಯೊಳಗಣ ಭೇದದಿಂದ ಒಲವರವಾಯಿತ್ತು. ಹಲವು ಕಡಹಿನಲ್ಲಿ ತೆಪ್ಪವನಿಕ್ಕಿದಡೆ, ಹೊಳೆ ಒಂದೆ, ಹಾದಿಯ ಹೊಲಬು ಬೇರಲ್ಲದೆ, ಧರೆ ಸಲಿಲ ಪಾವಕ ಇವು ಬೇರೆ ದೇವರ ಒಲವರವುಂಟೆ? ಧರೆ ಎಲ್ಲರಿಗೂ ಆಧಾರ, ಸಲಿಲ ಎಲ್ಲಕ್ಕೂ ಆಪ್ಯಾಯನ ಭೇದ, ಪಾವಕ ಸರ್ವಮಯರಿಗೆ ದಗ್ಧ. ಸರ್ವಮಯ ಪೂಜಿತ ದೈವದ ಆಧಾರ, ನೀನಲ್ಲದೆ ಬೇರೆಯಿಲ್ಲ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ.