ಪ್ರಾಣ ತುಡುಕಿಗೆ ಬಂದಲ್ಲಿ,
ಕೊರಳ ಹಿಡಿದು ಅವುಕಿ ಕೊಂದರೆಂಬ ಅಪಕೀರ್ತಿಯೇಕೆ?
ಬೀಳುವ ಪಾದುಕವ ತಳ್ಳಿ ಘನವ ಹೊರಲೇಕೆ?
ಬೇವ ಮನೆಗೆ ಕೊಳ್ಳಿಯ ಹಾಕಿ ದುರ್ಜನವ ಹೊರುವನಂತೆ,
ಅರಿಯದವನ ಅರಿಯರೆಂದು ಬಿರುದು ಮಾಡುವನ ಅರಿವು,
ಹರಿ[ದ] ಹರುಗೋಲವನೇರಿದಂತೆ,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗಾ.
Art
Manuscript
Music
Courtesy:
Transliteration
Prāṇa tuḍukige bandalli,
koraḷa hiḍidu avuki kondaremba apakīrtiyēke?
Bīḷuva pādukava taḷḷi ghanava horalēke?
Bēva manege koḷḷiya hāki durjanava horuvanante,
ariyadavana ariyarendu birudu māḍuvana arivu,
hari[da] harugōlavanēridante,
guḍiyoḍeya gum'maṭanāthana agamyēśvaraliṅgā.