Index   ವಚನ - 77    Search  
 
ಸಂಸಾರದಲ್ಲಿ ತೋರುವ ಸುಖದುಃಖಭೋಗಾದಿಭೋಗಂಗಳು ಇವಾರಿಂದಾದವೆಂದು ಅರಿದ ಮತ್ತೆ, ಬಾಗಿಲ ಕಾಯ್ದು ಕೂಗಿಡಲೇಕೆ? ಎಲೆ ಅಲ್ಲಾಡದು, ಅವನಾಧೀನವಲ್ಲದಿಲ್ಲಾ ಎಂದು ಎಲ್ಲರಿಗೆ ಹೇಳುತ ಭವಬಡಲೇಕೆ? ಹೋಯಿತ್ತು ಬಾಗಿಲಿಗೆ ಬಂದಾಗ ಭಾವಜ್ಞಾನ. ಭಾವ ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಅರಿದು, ಹರಿದು ಬದುಕಿರಣ್ಣಾ.