Index   ವಚನ - 79    Search  
 
ಬೀಜವ ಮೀರಿದ ವೃಕ್ಷವುಂಟೆ ಅಯ್ಯಾ? ಶಿರ ಹೊರಗಾದ ಚಕ್ಷುವುಂಟೆ ಅಯ್ಯಾ? ಕಾಯ ಹೊರಗಾದ ಭೋಗವುಂಟೆ ಅಯ್ಯಾ? ಇಷ್ಟ ಹೊರಗಾದ ಅರ್ಪಿತ ಅದೆತ್ತಣ ಬಾಯಿ? ಕಷ್ಟದ ಮಾತು ದೃಷ್ಟವಲ್ಲ, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವ ಅರಿತವರ ಅರಿವಲ್ಲ.