Index   ವಚನ - 9    Search  
 
ಗುರುಲಿಂಗಜಂಗಮವೆಂಬರಿಲ್ಲದೆ ಅರಿವುದಕ್ಕೆ ಒಬ್ಬರೂ ಇಲ್ಲವಯ್ಯ. ಕರುವ ಕಟ್ಟಿ ಎರಗಿದಲ್ಲದೆ ಕಂಚಿನ ಸ್ವರೂಪವಾಹುದೆ? ಸ್ಥಿರಚಿತ್ತ ಜೀವನವೆ ಪರಮ. ಪರಮನೆ ಜೀವನೆಂದಲ್ಲದೆ ಪರಿಪೂರ್ಣವಪ್ಪದೆ? ವಿರಹಿತ ಲೋಕಕ್ಕೆ ಅದಲ್ಲದೆ ಏಕೈಕ್ಯನು ಅಲ್ಲ. ಚರಲಿಂಗ ಶಿವಲಿಂಗ ಆಚಾರಲಿಂಗ ಪ್ರಸಾದಲಿಂಗ ಪ್ರಾಣಲಿಂಗ ಸಂಗ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.