‘ಯದ್ಭಾವಂ ತದ್ಭವತಿ’ ಎಂಬರಲ್ಲದೆ
ತದ್ಭಾವದ ಸದ್ಗತಿಯನೆತ್ತಬಲ್ಲರಯ್ಯ?
ಬುಧಹಂಕಾರವು ಭೂಮಿಯೊಳು ಹುಟ್ಟಿಹೊಂದಿಲ್ಲವೆ?
ಅದ್ವೈತ ಪರಬ್ರಹ್ಮವ ನುಡಿವರು, ಆತ್ಮನ ತಿಳಿವುಂಟೆ?
ಯದ್ಭಾವ ಏಕೋದೈವ ಏಕೋಮನ ಏಕೋಚಿತ್ತವಾದರೆ
ಸಿದ್ಧಿಯಪ್ಪುದು ತಪ್ಪದು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
‘Yadbhāvaṁ tadbhavati’ embarallade
tadbhāvada sadgatiyanettaballarayya?
Budhahaṅkāravu bhūmiyoḷu huṭṭihondillave?
Advaita parabrahmava nuḍivaru, ātmana tiḷivuṇṭe?
Yadbhāva ēkōdaiva ēkōmana ēkōcittavādare
sid'dhiyappudu tappadu kāṇā
ele nam'ma kūḍala cennasaṅgamadēvayya.