Index   ವಚನ - 49    Search  
 
ಒಂಬತ್ತು ರತ್ನವೆಂಬರಲ್ಲದೆ, ಕೊಂಬವರು ಕಾಣೆ ಕೊಡುವವರ ಕಾಣೆ. ಕುಂಬಾರನ ಮೃತ್ತಿಕೆಯ ಭಾಜನ ಎಂಬರಲ್ಲದೆ, ಕೊಂಬವರ ಕಾಣೆ ಕೊಡುವವರ ಕಾಣೆ. ಏಕಾಂಬರನ ಮೃತ್ತಿಕೆಗೆ ಬೆಲೆಯಿಲ್ಲ. ಶಂಭುವೆ ಸಮಸ್ತ ವಸ್ತುವಿಸ್ತೀರ್ಣ ಪ್ರಮಾಣ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.