ತತ್ವ ಅಂತರಂಗ, ತರಂಗ ತರಂಗ ತೃಪ್ತ
ನಿ[ತ್ಯ]ತೃಪ್ತ, ನಿರಾಲಂಬ ತೃಪ್ತ, ನಿರಾಳನಾಳ
ಭಕ್ತಾತ್ಮ ಅರ್ಘ್ಯ ಅನರ್ಘ್ಯ, ಅಪರಿಮಿತ ಅನರ್ಘ್ಯ
ತತ್ವ ಪಂಚ ಪಂಚವಿಂಶತಿ,
ಸತ್ಯ ಷಡುಸ್ಥಲಬ್ರಹ್ಮ ಸಾಧ್ಯ ಅಸಾಧ್ಯ,
ನಿತ್ಯ ಗುಹೇಶ್ವರಲಿಂಗ, ಶೂನ್ಯ ನಿಶ್ಯೂನ್ಯ ಶೂನ್ಯ
ಮುಕ್ತಿಮುಖ ಪ್ರಸಾದ ಐಕ್ಯಸ್ಥಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.