Index   ವಚನ - 57    Search  
 
ಪಿಂಡಾಂಡವ ಕಾಣದವರು ಬ್ರಹ್ಮಾಂಡವನೆತ್ತಬಲ್ಲರಯ್ಯ? ಮುಂಡದಲ್ಲಿ ಕಾದುವೆನೆಂಬ ಮೂರ್ಖರ ಒಪ್ಪುವನೆ ಗುರುವು? ಗಂಡನಿದ್ದು ಪರಪುರಷರ ಸಂಗವ ಮಾಡಲು ಗರತಿಲಕ್ಷಣವೆ? ಉಂಡುತೇಗಿ ತೃಪ್ತಿವಡೆ[ದು]ದೆಲ್ಲ ಊರ್ಜಿತವ ಕಾಣುವುದೆ? ದಂಡವಾಯಿತು ಕ್ರಿಯದ ಮಾಟ, ನಿಷ್ಕ್ರಿಯದ ಬೇಟೆ ಹಂಡಿಯಲ್ಲಿ ಅಳೆದಂತೆ ಆಯಿತು. ನೀನೆ ಶೆಟ್ಟಿಯೆಂದು ಎಂದರೆ ಖಂಡಿತವಿಲ್ಲಂದಲಿ, ಕಾಲಜ್ಞಾನವು ಕರಸಂವತ್ಸರ, ಪಿಂಡಬ್ರಹ್ಮಾಂಡದೊಳು ಸೂತ್ರ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.