ವಚನ - 431     
 
ಹೋದೆನೂರಿಗೆ, ಇದ್ದೆ ನಾನಲ್ಲಿ, ಹೋದಡೆ ಮರಳಿತ್ತ ಬಾರೆನವ್ವಾ. ಐವರು ಭಾವದಿರು, ಐವರು ನಗೆವೆಣ್ಣು ಈ ಐವರು ಕೂಡಿ ಎನ್ನ ಕಾಡುವರು ಬೈವರು ಹೊಯ್ವರು ಮಿಗೆ ಕೇಡ ನುಡಿವರು. ಇವರೈವರ ಕಾಟಕ್ಕೆ ನಾನಿನ್ನಾರೆ ಕಂಡವ್ವಾ. ಅತ್ತೆ ಮಾವ ಮೈದುನ ನಗೆವೆಣ್ಣು, ಚಿತ್ತವನೊರೆದು ನೋಡುವ ಗಂಡ, ಕತ್ತಲೆಯಾದಡೆ ಕರೆದನ್ನವ ನೀಡವ್ವಾ, ಅತ್ತಿಗೆ ಹತ್ತೆಂಟ ನುಡಿವಳಮ್ಮಮ್ಮ ತಾಯೆ. ಉಪಮಾತೀತರು [ರುದ್ರಗಣಂಗಳು] [ಅವರೆನ್ನ]ಬಂಧುಬಳಗಂಗಳು. [ನಮ್ಮ]ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದಡೆ ಮರಳಿ[ತ್ತ] ಬಾರೆನಮ್ಮ ತಾಯೆ.