Index   ವಚನ - 142    Search  
 
ತನುವಂ ಸತ್ತಿಪ್ಪುದು ಅಪೇಕ್ಷದ ಚೇಳು. ಮನವ ಸುತ್ತಿಪ್ಪುದೆ ಮಾಯಾಮೋಹವೆಂಬ ಸೀಗರ ಮುಳ್ಳು. ನೆನಹ ಮುಸುಕಿಪ್ಪುದು ನೆಳಲ ಮಂಜಿನ ಹೊದಿಕೆ. ಜನಿತಾರ್ಥವು ಅದರೊಳಗಣ ಬಾಳೆಯ ಸಸಿ. ಗೊನೆ ಹೂವು ಎಲೆ ಸೊಂಕದೆ ಬೆಳೆವದು. ಬಸವಸಂತತಿ ಘನವಹುದು. ಬಾಳೆಗೆ ಫಲವ ಕಡೆ, ಭಕ್ತಗೆ ವಚನವೆ ಕಡೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.