Index   ವಚನ - 149    Search  
 
ಪಂಚತತ್ವ ಪಂಚತತ್ವ ಎಂಬ ಅಣ್ಣಗಳಿರಾ ಕೇಳಿರಿ: ತತ್ವವೊಂದರಿಂದ ಪಂಚತತ್ವವುಂಟು. ಅದೆಂತೆಂದರೆ- ಪೃಥ್ವಿಯಲ್ಲಿ ಅಪ್ಪು ತೇಜ ವಾಯು ಆಕಾಶ, ಅಪ್ಪುವಿನಲ್ಲಿ ಪೃಥ್ವಿ ತೇಜ ವಾಯು ಆಕಾಶ, ತೇಜದಲ್ಲಿ ಪೃಥ್ವಿ ಅಪ್ಪು ವಾಯು ಆಕಾಶ, ವಾಯುವಿನಲ್ಲಿ ಪೃಥ್ವಿ ಅಪ್ಪು ತೇಜ ಆಕಾಶ, ಆಕಾಶದಲ್ಲಿ ಪೃಥ್ವಿ ಅಪ್ಪು ತೇಜ ವಾಯು, ಇಂತೀ ಇಪ್ಪತ್ತೈದು ತತ್ವಮಂ ಅರಿತು ಅಂಗದೊಳೈಕ್ಯವಾಗಿ ನಿರಾಳಕ್ಕೆ ನಿರಾಳವಾದರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.