•  
  •  
  •  
  •  
Index   ವಚನ - 206    Search  
 
ಮನದ ಸುಖವ ಕಂಗಳಿಗೆ ತಂದರೆ, ಕಂಗಳ ಸುಖವ ಮನಕ್ಕೆ ತಂದರೆ, ನಾಚಿತ್ತು, ಮನ ನಾಚಿತ್ತು. ಸ್ಥಾನಪಲ್ಲಟವಾದ ಬಳಿಕ ವ್ರತಕ್ಕೆ ಭಂಗ ಗುಹೇಶ್ವರಾ.
Transliteration Manada sukhava kaṅgaḷige tandare, kaṅgaḷa sukhava manakke tandare, nācittu, mana nācittu. Sthānapallaṭavāda baḷika vratakke bhaṅga guhēśvarā.
Music Courtesy:
Hindi Translation मन के सुख को आँखों में लाये तो, आँखों के सुखको मन में लाये तो, लज्जित हुआ मन, लज्जित हुआ। स्थान पल्लट होने पर व्रतभंग गुहेश्वरा। Translated by: Eswara Sharma M and Govindarao B N
Tamil Translation மனத்தின் இன்பத்தைக் கண்களுக்கு ஈந்தால் கண்களின் இன்பத்தை மனத்திற்கு ஈந்தால் நாணியது, மனம் நாணியது நிலை நிலைமாறின் நோன்பிற்கு இழுக்கு குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಂಗಳ ಸುಖ = ಲಿಂಗೋಪಾಸಕನ ಕಣ್ಣುಗಳು ಸುಖಿಸುವ ಸ್ಥಳ, ನೆಲೆ; ಇಷ್ಟಲಿಂಗ; ಮನದ ಸುಖ = ಪ್ರಾಣಲಿಂಗಿಯ ಮನಸ್ಸು ಸುಖಿಸುವ ಸ್ಥಳ, ನೆಲೆ; ಪ್ರಾಣಲಿಂಗ ; ವ್ರತ = ನಿಯಮ, ಲಿಂಗತತ್ವ್ತದ ನಿಜಸ್ವರೂಪವನ್ನು ಯಥಾವತ್ತಾಗಿ ಅರಿಯುವೆನು ಎಂಬ ಮನೋನಿರ್ಧಾರ; ಸ್ಥಾನಪಲ್ಲಟ = ಸ್ಥಾನಾಂತರ; Written by: Sri Siddeswara Swamiji, Vijayapura