Index   ವಚನ - 8    Search  
 
ಅನ್ಯಶಬ್ದಕ್ಕೆ ಜಿಹ್ವಾ ಬಂಧನ, ದುರ್ಗಂಧಕ್ಕೆ ನಾಸಿಕ ಬಂಧನ, ನಿಂದೆಗೆ ಕರ್ಣ ಬಂಧನ, ದೃಕ್ಕಿಂಗೆ ಕಾಮ್ಯ ಬಂಧನ, ಚಿತ್ತಕ್ಕೆ ಆಶಾ ಬಂಧನ, ಅಂಗಕ್ಕೆ ಅಹಂಕಾರ ಬಂಧನ. ಇಂತೀ ಷಡ್ಭಾವಬಂಧಂಗಳ ಹರಿದಲ್ಲದೆ ಅರುವತ್ತುನಾಲ್ಕು ಶೀಲಕ್ಕೆ ಸಂಬಂಧಿಯಲ್ಲ. ಹೀಂಗಲ್ಲದೆ ಕಾಂಬವರ ಕಂಡು, ಅಲ್ಲಿ ಒಂದ ತಂದು, ಇಲ್ಲಿ ಒಂದ ಕೊಟ್ಟಿಹೆನೆಂದು ಕಳ್ಳನ ತಾಯಂತೆ ಅಲ್ಲಿ ಇಲ್ಲಿ ಹಾರೈಸುತ್ತ- ಇಂತೀ ಸಜ್ಜನಗಳ್ಳರ ಕಂಡು ಬಲ್ಲವರೊಪ್ಪುವರೆ ಕಳ್ಳರ ವ್ರತವ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವನೆಲ್ಲಿಯು ಒಲ್ಲನಾಗಿ.