ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ
ಅನಾಚಾರಿಗಳ ಮುಖವ ನೋಡಬಹುದೆ?
ಆಚಾರ ಅಟ್ಟದ ಹೊನ್ನೆ? ಮೊತ್ತದ ಮಡಕೆಯೆ?
ಸಂತೆಯ ಬೆವಹಾರವೆ? ಜೂಜಿನ ಮಾತೆ?
ವೇಶ್ಯೆಯ ಸತ್ಯವೆ? ಪೂಸರ ವಾಚವೆ?
ಇಂತೀ ವ್ರತದ ನಿಹಿತವ ತಿಳಿದಲ್ಲಿ,
ಇಷ್ಟಬಾಹ್ಯನ ವ್ರತಭ್ರಷ್ಟನ ಸರ್ವಪ್ರಮಥರಲ್ಲಿ ಅಲ್ಲಾ ಎಂದವನ
ನಾನರಿತು ಕೂಡಿದೆನಾದಡೆ, ಅರಿಯದೆ ಕೂಡಿ ಮತ್ತರಿದಡೆ,
ಆ ತನುವ ಬಿಡದಿರ್ದಡೆ ಎನಗದೆ ಭಂಗ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು
ತಪ್ಪಿದಡೆ ಹೊರಗೆಂದು ಮತ್ತೆ ಕೂಡಿಕೊಳ್ಳೆ.
Art
Manuscript
Music
Courtesy:
Transliteration
Ācāra tappidalli prāyaścitta uṇṭemba
anācārigaḷa mukhava nōḍabahude?
Ācāra aṭṭada honne? Mottada maḍakeye?
Santeya bevahārave? Jūjina māte?
Vēśyeya satyave? Pūsara vācave?
Intī vratada nihitava tiḷidalli,
iṣṭabāhyana vratabhraṣṭana sarvapramatharalli allā endavana
nānaritu kūḍidenādaḍe, ariyade kūḍi mattaridaḍe,
ā tanuva biḍadirdaḍe enagade bhaṅga.
Ācārave prāṇavāda rāmēśvaraliṅgavu
tappidaḍe horagendu matte kūḍikoḷḷe.