ಆಚಾರ ತಪ್ಪಿದಲ್ಲಿ, ಶ್ರೇಷ್ಠನು ನಾನೆಂದು
ಆಚಾರವನು ಅನುಸರಣೆಯ ಮಾಡಬಹುದೆ?
ಆಚಾರಕ್ಕೂ ಪಕ್ಷಪಾತ ಉಂಟೆ?
ಕಿತ್ತ ಕಣ್ಣಿ ಗಂಟನಿಕ್ಕಿದ ಮತ್ತೆ ಅಳತಕ್ಕುಂಟೆ?
ಸತ್ಯ ತಪ್ಪಿ ನಡೆದ ಮತ್ತೆ ಭಕ್ತಿಯುಂಟೆ?
ಕೆಟ್ಟು ನಡೆದ ಅಂಗನೆಯಲ್ಲಿ ದೃಷ್ಟವ ಕಂಡ ಮತ್ತೆ
ದಿಷ್ಟ ದಿಬ್ಯ ಉಂಟೆ?
ಅದು ಬಾಯ ಬಗದಳದಂತೆ, ಇನ್ನಾರಿಗೆ ಪೇಳುವೆ?
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಲ್ಲದ ನೇಮ.