Index   ವಚನ - 251    Search  
 
ಸರಮ(ಮೆ?)ಳೆಯೊಳು ಶಿಲೆ ಸಿಕ್ಕಿದ್ದರೇನು, ಕುರಿ ಮೇಯಬಂದು ಪಾದವನ್ನಿಟ್ಟು ಪತ್ರಪುಷ್ಪವ ತರಿದೊಟ್ಟದಂತೆ, ಉರದ ಮೇಲೊಂದು ಸಜ್ಜೆ ವಾರಗಿತ್ತಿಗಿದ್ದರೇನು, ಸೆರೆಗೆ ಹಾಸದ ಮಾಳ್ಪಳೆ ಸರ್ವರಿಗೆ? ವರವ ಕೊಟ್ಟಿತು ಎಂದು ಹಿರಿಯಕಲ್ಲಿಗೆ ಕಿರಿಯಕಲ್ಲು ಅಡ್ಡಗೆಡಹುವಗೆ ಸತ್ಯವಂತೋ ನಮಃಶಿವಾಯ! ಕುಸುವಾಯ(?) ಹುರುಡಿಗೆ ಕಟ್ಟುವ, ಕಟ್ಟನೆ ಕೊಂಬವ ಕೊರವ ಕೊರವಿ ಕುಡಿಕುಡಿದು ಕಾದಾಡಿದಂತಾಯಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.