Index   ವಚನ - 257    Search  
 
ನುಡಿವದು ಶಿವಾಚಾರ ಶಬ್ದವು, ನಡೆವದು ಅನಾಚಾರದ ಅಪದ್ಧವು. ನುಡಿ ಯಾತಕೊ, ನಡೆ ಯಾತಕೊ, ನಡೆನುಡಿ ಇಲ್ಲದವಂಗೆ? ನಡೆವಿಡಿ ನುಡಿವಿಡಿ ಕಡೆಗಾಬುದಲ್ಲದೆ, ಸುಡುಗಾಡಿನ ಹೆಣನ ಒಯ್ದು ಬಣ್ಣಿಸಲು ಕಡೆಗಾಂಬುದೆ? ಸೊಡರನೊಯ್ದು ಬೀದಿಯಲ್ಲಿಟ್ಟಂತೆ, ನಡೆವಿಡಿಯ[ಲಿ]ಲ್ಲವು. ಕಡವ ಕೊಟ್ಟಂತೆ, ಮೂಕೊರೆನ ಸೊಲ್ಲಿನ ಸೊಲ್ಲಿಗೆಯಲ್ಲಿ. ಜಡಬುದ್ದಿಗೆ ಶಿವಚಾರ ಸಿಕ್ಕದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.