ಧನಿಕ ನಿರ್ಧನಿಕ ಕಾಲಿಗೆ ಕೊರಳಿಗೆ ಕಟ್ಟಿಸಿಕೊಂಬರೆ?
ಧನಿಕರಾರು ಬಲ್ಲರೆ ಹೇಳಿರೆ, ಅರಿಯದಿದ್ದರೆ ಕೇಳಿ;
ಧನಿಕ ಭಕ್ತಿ, ನಿರ್ಧನಿಕ ಅಚಾರ್ಯ.
ಕೊಟ್ಟ ದೀಕ್ಷವ ಕೊಡದಿದ್ದಾಗಲೆ
ಕಾಲಿಗೆ ಕೊರಳಿಗೆ ಬಂತು.
ಕೊಂಡುದ ಕೊಟ್ಟು ಭ್ರಷ್ಟರಾದರು.
ಕೊಟ್ಟುದ ಕೊಂಡು ನಿಷ್ಠ[ನಷ್ಟ?]ರಾದರು.
ಇದು ಕಾರಣ ದೇಶಾಂತರಿಗಳಾದರು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.