Index   ವಚನ - 270    Search  
 
ಕುಲನಿಷೇದ ನಿಂದೆ ಕುಂದು ಮಂದಮತಿ ಪೊಂದುವುದೆ ಭಕ್ತಂಗೆ? ಕಲಹ ಕಪಟ ಕರ್ಮ ಕಾಯಕದೊಳಿಪ್ಪುವೆ? ಒಲಿವನ ಶಿವ ಅಂತರ್ಗೆ ಮಲಪಾಶಕರ್ಗೆ ಕುಲಕಾಯಕಕೆ ಪೆಸರು ನೆಲೆ ನಿಷೇದ[ಗಳು] ನಿಂದೆ ಕುಂದು ಮಂದಮತಿ ಹೊಂದಿದ ಕಾರಣದಿಂದಲಿ ಸಲೆ ಶಿವನ ಒಲುಮೆ ದೂರ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.