Index   ವಚನ - 288    Search  
 
ಅವಗುಣವಂ ಬಿಟ್ಟು ಗುಣವ ಮುಟ್ಟು, ಸವಿರಾತ್ರಿಯ ಬಿಟ್ಟು ಸತ್ಯವ ಮುಟ್ಟು. ಸವಿನರಕ[ದ] ಹೊನ್ನು, ಹೆಣ್ಣು, ಮಣ್ಣಿಂಗೆ ಹರಿಯದಿರಲು ಶಿವಭಕ್ತಿ ಸೇರುವುದೆ, ಸೀಮೆ ಆಳಿದು ನಿಸ್ಸೀಮನಾಹುದು. ಪವಿತ್ರಂಗೆ ಆಹುದಯ್ಯ, ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.