ಎನ್ನ ಲಿಂಗದ ಸೀಮೆಯಲ್ಲಿದ್ದ ಗೋವತ್ಸ
ಮೊದಲಾದ ಘಟಕ್ಕೆಲ್ಲಕ್ಕೂ
ಶಿವಲಿಂಗಪೂಜೆ, ಪಂಚಾಚಾರಶುದ್ಧ ನೇಮ.
ಭಾವ ತಪ್ಪದೆ ಪಾದೋದಕ ಪ್ರಸಾದವಿಲ್ಲದೆ
ತೃಣ ಉದಕವ ಮುಟ್ಟಿದಡೆ
ಎನ್ನ ಸೀಮೆಗೆ, ಎನ್ನ ವ್ರತಾಚಾರಕ್ಕೆ, ನಾ ಕೊಂಡ ಗಮನಕ್ಕೆ-
ತನುವಿಗೆ ಬಂದಲ್ಲಿ ಭೀತಿ,
ಆತ್ಮಕ್ಕೆ ಬಂದಲ್ಲಿ ಸಂದೇಹವ ಮಾಡಿದಡೆ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
Art
Manuscript
Music
Courtesy:
Transliteration
Enna liṅgada sīmeyallidda gōvatsa
modalāda ghaṭakkellakkū
śivaliṅgapūje, pan̄cācāraśud'dha nēma.
Bhāva tappade pādōdaka prasādavillade
tr̥ṇa udakava muṭṭidaḍe
enna sīmege, enna vratācārakke, nā koṇḍa gamanakke-
tanuvige bandalli bhīti,
ātmakke bandalli sandēhava māḍidaḍe,
ācārave prāṇavāda rāmēśvaraliṅgakke dūra.