ಎಲ್ಲವ ಮೀರಿ ಶೀಲವಂತನಾದಲ್ಲಿ
ರೋಗವೆಲ್ಲಿಂದ ಬಂದಿತು?
ಆ ಗುಣ ತನುವಿನಲ್ಲಿಯ ತೊಡಕು;
ರುಜೆ ಪ್ರಾಣವ ಕೊಳ್ಳಲರಿಯದು.
ಅಂಗದ ಡಾವರಕ್ಕೆ ಸೈರಿಸಲಾರದೆ,
ಮದ್ದ ತಾ ಲಿಂಗಕ್ಕೆ ತೋರಿ,
ಜಂಗಮಕ್ಕೆ ಕೊಟ್ಟು, ಜಂಗಮ ಪ್ರಸಾದವೆಂದು
ಲಿಂಗ ಜಂಗಮವ ಹಿಂಗದೆ ಕೊಳ್ಳೆಂದು
ಹೇಳುವ ಅನಂಗಿಗಳಿಗೆ
ಗುರು ಲಿಂಗ ಜಂಗಮ ಮೂರರಲ್ಲಿ ಒಂದೂ ಇಲ್ಲ ಎಂದೆ.
ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗವಾದಡೂ ತಪ್ಪನೊಪ್ಪಗೊಳ್ಳೆ.
Art
Manuscript
Music Courtesy:
Video
TransliterationEllava mīri śīlavantanādalli
rōgavellinda banditu?
Ā guṇa tanuvinalliya toḍaku;
ruje prāṇava koḷḷalariyadu.
Aṅgada ḍāvarakke sairisalārade,
madda tā liṅgakke tōri,
jaṅgamakke koṭṭu, jaṅgama prasādavendu
liṅga jaṅgamava hiṅgade koḷḷendu
hēḷuva anaṅgigaḷige
guru liṅga jaṅgama mūraralli ondū illa ende.
Ācārave prāṇavāda
rāmēśvaraliṅgavādaḍū tappanoppagoḷḷe.