Index   ವಚನ - 25    Search  
 
ಎಲ್ಲಾ ವ್ರತಕ್ಕೂ ಜಂಗಮದ ಪ್ರಸಾದವೆ ಪ್ರಾಣ. ಎಲ್ಲಾ ನೇಮಕ್ಕೂ ಜಂಗಮ ದರ್ಶನವೆ ನೇಮ. ಎಲ್ಲಾ ಶೀಲಕ್ಕೂ ಜಂಗಮಮಾಟವೆ ಶೀಲ. ಇಂತೀ ವ್ರತ ನೇಮ ಶೀಲಂಗಳೆಲ್ಲವೂ ಜಂಗಮದ ಮುಂದಿಟ್ಟು ಶುದ್ಧತೆಯಹ ಕಾರಣ ಆ ಜಂಗಮದಲ್ಲಿ ಅರ್ಥ ಪ್ರಾಣ ಅಭಿಮಾನಕ್ಕೆ ಕಟ್ಟುಮಾಡಿದೆನಾದಡೆ ಎನಗದೆ ದ್ರೋಹ. ಆ ಜಂಗಮದ ದರ್ಶನದಿಂದ ಸಕಲ ದ್ರವ್ಯ ಪವಿತ್ರ. ಆ ಜಂಗಮದ ಪಾದತೀರ್ಥದಿಂದ ಘನಲಿಂಗಕ್ಕೆ ಜೀವಕಳೆ. ಆ ಜಂಗಮದ ಪ್ರಸಾದದಿಂದ ಘನಲಿಂಗಕ್ಕೆ ತೃಪ್ತಿ. ಇಷ್ಟನರಿತಲ್ಲಿ ಜಂಗಮಲಿಂಗಕ್ಕೆ ಸಂದೇಹ ಮಾಡಿದಡೆ ಎನಗೆ ಕುಂಭೀಪಾತಕದಲ್ಲಿ ನಾಯಕನರಕ ತಪ್ಪದು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿ ಮುಳುಗುವೆನು.