ನಿಂದೆ ವಂದನೆ ತಂದಿಟ್ಟಿರಿ, ಜಗಕೆ ದ್ವಂದ್ವವ ಕೂಡಿಸಿ
ಕುಂದುಕೊರತೆ ನಿಮಗಿಲ್ಲವು.
ಸಂದೇಹಿ ಜಗದೊಳೆಲ್ಲ ಮಂದಮತಿ ಮಾನವರಿದರೊಳು,
ಸಂದುಸಂಶಯವ ಮಾಡತಲಿಪ್ಪರು
ಹೆದರುತ ಮನದೊಳು,
ಎಂದೆಂದು ಈ ಕ್ರೋಧದಲ್ಲಿ ಬೆಂದುಹೋಪುದಯ್ಯ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Ninde vandane tandiṭṭiri, jagake dvandvava kūḍisi
kundukorate nimagillavu.
Sandēhi jagadoḷella mandamati mānavaridaroḷu,
sandusanśayava māḍatalipparu
hedaruta manadoḷu,
endendu ī krōdhadalli benduhōpudayya
ele nam'ma kūḍala cennasaṅgamadēvayya.