Index   ವಚನ - 363    Search  
 
ಕಾಲ ತೊಳೆದು ಕಾಲಕಾಲ ನಷ್ಟಭ್ರಷ್ಟರಾದರು. ಹೋಲಿವೆಗೆ ಒಕ್ಕುಮಿಕ್ಕುದ ಕೊಟ್ಟು ಹೋದರೆ ಪೂರ್ವಕ್ಕೆ. ಮೇಲುಪ್ರಸಾದ ತೀರ್ಥವಿದ್ದು, ಇಹ ತೆರನ ಮೇರೆಯನ್ನರಿಯದೆ ಸ್ಥೂಲವಿದು ಭಕ್ತಿಸ್ಥಲ, ಸೂಕ್ಷ್ಮ ಕಾರಣ ಪಾಲಿಸುವುದು ನಿಮ್ಮ ದಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.