Index   ವಚನ - 5    Search  
 
ಇನ್ನು ಏಕೋತ್ತರ ಶತಸ್ಥಲವನ್ನು ಗರ್ಭೀಕರಿಸಿಕೊಂಡು ತೋರುವ ಷಟ್ಷ್ಥಲ ಸ್ಥಾಫಕರಾದ ತೋಂಟದ ಸಿದ್ಧೇಶರಸ್ವಾಮಿಗಳ ಗುರುಕುಲದನ್ವಯವೆಂತೆಂದಡೆ; ಪ್ರಥಮದಲ್ಲಿ ಅನಾದಿ ಗಣೇಶ್ವರನ ಶಿಷ್ಯರು ಆದಿ ಗಣೇಶ್ವರರು, ಅದಿ ಗಣೇಶ್ವರರ ಶಿಷ್ಯರು ನಿರ್ಮಾಯನೆಂಬ ಗಣೇಶ್ವರರು, ಆ ನಿರ್ಮಾಯನೆಂಬ ಗಣೇಶ್ವರ ಶಿಷ್ಯರು ಜ್ಞಾನಾನಂದನೆಂಬ ಗಣೇಶ್ವರರು. ಆ ಜ್ಞಾನನಂದನೆಂಬ ಗಣೇಶ್ವರರ ಶಿಷ್ಯರು ಆತ್ಮ ಗಣೇಶ್ವರರು. ಆತ್ಮ ಗಣೇಶ್ವರರ ಶಿಷ್ಯರು ಆಧ್ಯಾತ್ಮ ಗಣೇಶ್ವರರು, ಆ ಆಧ್ಯತ್ಮಾ ಗಣೇಶ್ವರರ ಶಿಷ್ಯರು ರುದ್ರನೆಂಬ ಗಣೇಶ್ವರರು, ಆ ರುದ್ರನೆಂಬ ಗಣೇಶ್ವರರ ಶಿಷ್ಯರು ಬಸವಪ್ರಭುದೇವರು, ಆ ಬಸವಪ್ರಭುದೇವರ ಶಿಷ್ಯರು ಆದಿಲಿಂಗದೇವರು, ಆ ಆದಿಲಿಂಗದೇವರ ಶಿಷ್ಯರು ಚನ್ನವೀರೇಶ್ವರದೇವರು, ಆ ಚನ್ನವೀರೇಶ್ವರದೇವರ ಶಿಷ್ಯರು ಹರದನಹಳ್ಳಿಯ ಗೋಸಲದೇವರು, ಆ ಹರದನಹಳ್ಳಿಯ ಗೋಸಲದೇವರ ಶಿಷ್ಯರು ಶಂಕರದೇವರು, ಆ ಶಂಕರದೇವರ ಶಿಷ್ಯರು ದಿವ್ಯಲಿಂಗದೇವರು, ಆ ದಿವ್ಯಲಿಂಗದೇವರ ಶಿಷ್ಯರು ಚನ್ನಬಸವೇಶ್ವರದೇವರು, ಆ ಚನ್ನಬಸವೇಶ್ವರ ದೇವರ ಕರಕಮಲದಲ್ಲಿ ಉತ್ಪತ್ತಿಯಾದ ತೋಂಟದ ಸಿದ್ಧಲಿಂಗ ಸ್ವಾಮಿಗಳು, ಆ ತೊಂಟದ ಸಿದ್ಧಲಿಂಗಸ್ವಾಮಿಗಳು ಅನುಭವ ಪ್ರಸಾದರ್ಹರಾದ ನಿರಕ್ಷರ ಬೋಳಬಸವೇಶ್ವರದೇವರು, ಅವರನುಭವ ಪ್ರಸನ್ನ ಪಾತ್ರರಾದ ಸಿದ್ಧವೀರದೇವರು, ಅವರನುಗ್ರಹ ಯೋಗ್ಯರಾದ ಗುರುಸಿದ್ಧದೇವರು, ಅವರ ಕೃಪಾ ಉಪದೇಶಕ್ಕೆ ಪಾತ್ರಾರಾದ ಗಗನದಸ್ವಾಮಿಗಳು, ಅವರ ಜ್ಞಾನೋಪದೇಶಕ್ಕೆ ಪಾತ್ರರಾದ ಕಟ್ಟಿಗೆಹಳ್ಳಿ ಸಿದ್ಧಲಿಂಗದೇವರು, ಅವರ ಸಟ್ಸ್ಥಲ ಜ್ಞಾನಪ್ರಸಾದಕ್ಕೆ ಯೋಗ್ಯರಾದ ಮುರಿಗೆ ಶಾಂತವೀರೇಶ್ವರದೇವರು, ಅವರ ಜ್ಞಾನನುಗ್ರಹಕ್ಕೆ ಯೋಗ್ಯರಾದ ಇಮ್ಮಡಿ ಮುರಿಗೆಯ ಗುರುಸಿದ್ಧದೇವರು, ಅವರ ಜ್ಞಾನಾನುಭವ ಪ್ರಸಾದಕ್ಕೆ ಪಾತ್ರರಾದ ನೀಲಮ್ಮನ ಸಿದ್ಧಲಿಂಗದೇವರು, ಅವರ ಷಟ್ಸ್ಥಲ ಜ್ಞಾನೋಪದೇಶಕ್ಕೆ ಅಧಿಕಾರಿಯಾದ ಪರ್ವತ ನಾನಯ್ಯ ಶಾಂತವೀರೇಶ್ವರಾ ಗ್ರಂಥ: ಷಟ್ಸ್ಥಲ ಬ್ರಹ್ಮರೂಪಾಯ| ಶಿವಶಕ್ತಿ ಸ್ವರೂಪಣಿ| ಷಟ್ಸಾದಾಖ್ಯ ಸ್ವರೂಪಾಯ| ಶಾಂತವೀರಾಯ ತೇ ನಮಃ || ಶ್ರೀಮತ್ಸಾಂದ್ರ ಚಂದ್ರ ಕರ್ಪೂರ ತಾರಹಾರ ತುಷಾರ ಪಟೀರ ಸರೋರ್ವೀಜ ವೃಂದ ಸದೃಶಾಂಗ ಷಟ್ಸ್ಥಲಾದ್ಯ ಪ್ರವರ್ತಕ ಹೃತ್ಪದ್ಮ ದಿವಾಕರ ತ್ರಿಲೋಚನ ಚತುರ್ಭುಜ ಸುರರಾಜ ಪ್ರಮುಖ ದನುಜ ಮನುಜ ಕಿರೀಟ ರಂಜಿತ ಪಾದ ಪಂಕಜ ಬಾಲೇಂದುಪುರ ನಿವಾಸ ಶ್ರೀ ಶಾಂತವೀರೇಶ್ವರ ಪ್ರಭುವೆ ರಕ್ಷಸೆನ್ನಂ ಏಕೋತ್ತರ ಶತಸ್ಥಲಂಗಳ ನಾಮಂಗಳ ಸಂಗ್ರಹಿಸುತಿರ್ದಪೆವು ಅದೆಂತೆಂದಡೆ: ಪಿಂಡಜ್ಞಾನ ಸಂಸಾರ ಹೇಯ ಗುರುಕಾರುಣ್ಯ ಲಿಂಗಧೃತಿ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ ಭಕ್ತೋಭಯ ತ್ರಿವಿಧ ಸಂಪದ. ಚತುರ್ವಿದ ಸಾರ ಸೋಪಾಧಿ ಸಹಜ ದಾನೇತಿ ಭಕ್ತಸ್ಥಲಾನಿ ಪಂಚದಶ ಮಹೇಶ್ವರ: ಲಿಂಗನಿಷ್ಠಾ ಪೂರ್ವಶ್ರಯನಿರಾಸ ವಾಗದ್ವೈತನಿರಾಕೃತಿ ಆಹ್ವಾನ ವಿಸರ್ಜನಷ್ಟಮೂರ್ತಿ ನಿರಾಕೃತಿ ಸರ್ವಗತ ನಿರಾಸ ಶಿವ ತತ್ವ ಭಕ್ತದೇಹಿಕೇತಿ ಮಾಹೇಶ್ವರಸ್ಯ ಸ್ಥಲಾನಿ ನವ ಪ್ರಸಾದಿ: ಗುರುಮಮಹಾತ್ಮ್ಯಂ ಲಿಂಗಮಹಾತ್ಮ್ಯಂ ಜಂಗಮಮಹಾತ್ಮ್ಯಂ ಭಕ್ತ್ಯ ಮಹಾತ್ಮ್ಯಂ ಶರಣ ಮಹಾತ್ಮ್ಯಂ ಪ್ರಸಾದ ಮಹಾತ್ಮ್ಯಂ ಪ್ರದಿನಃ ಸಪ್ತಕಂ ಪ್ರಾಣಲಿಂಗಿ: ಪ್ರಾಣಲಿಂಗಾರ್ಚನ ಶಿವಯೋಗ ಸಮಾಧಿ ಲಿಂಗ ನಿಜ ಅಂಗ ಲಿಂಗೇತೀತ್ಯ ಸುಲಿಂಗಿನಃ ಪಂಚ ಶರಣ: ತಾಮಸ ವರ್ಜನ ನಿರ್ದೇಶ ಶೀಲಸಂಪಾದನೇತಿ ಶರಣಸ್ಥಲ ಚತುರ್ವಿಧಂ ಐಕ್ಯಮಾಚಾರ ಸಂಪತ್ತಿರೇಕ ಭಾಜನ ಸಹಭಾಜನ ಮಿತ್ಯೈಕ್ಯಸ್ಥಲ ಚತುರ್ಥತ್ವಂ ಪದಮಿತಿ ಶ್ರೀ ಶ್ರೀ ಶ್ರೀ ತತ್ವದಮಿತಿ ಕಿಂ ಲಿಂಗಂ | ಪುರುಷ | ಲಿಂಗಸ್ಥಲ ಪಂಚಾಕ್ಷರಿ ಸಪ್ತಧಾ ದೀಕ್ಷಾ ಗುರುಸ್ಥಲ ಶಿಕ್ಷಾಗುರುಸ್ಥಲ ಪ್ರಜ್ಞಾಗುರುಸ್ಥಲ ಕ್ರಿಯಾಲಿಂಗ ಭಾವಲಿಂಗ ಜ್ಞಾನಲಿಂಗ ಸ್ಥಲ ಸ್ವಯ ಚರ ಪರಂ ಚೇತ್ಯಾಚಾರಲಿಂಗಸ್ಥಲಾನಿ ನವ ಸಕಾಯ ಅಕಾಯ ಪರಕಾಯ ಧರ್ಮಾಚಾರ ಭಾವಚಾರ ಜ್ಞಾನಚಾರಂ ಚೇತಿ ಗುರುಲಿಂಗಸ್ಥಲಾನಿ ನವ ಕಾಯಾನುಗ್ರಹಮಿಂದ್ರಿಯಾನುಗ್ರಹ ಕಾಯಾರ್ಪಿತ ಕರಣಾರ್ಪಿತ ಭಾವಾರ್ಪಿತ ಶಿಷ್ಯ ಶುಶ್ರೂಷ ಸೇವ್ಯೇತಿ ಕ್ರಮಶಃ ಶಿವಲಿಂಗ ಸ್ಥಲಾನಿ ನವಕಂ ಜೀವಾತ್ಮಾಂತರಾತ್ಮ ಪರಮಾತ್ಮ ನಿರ್ದೇಹಾಗಮ ನಿರ್ಭಾವಾಗಮ ನಿಷ್ಠಾಗಮ ಆದಿ ಪ್ರಸಾದಿ ಅಂತ್ಯ ಪ್ರಸಾದಿ ಸೇವ್ಯ ಪ್ರಸಾದಿತಿ ಪ್ರಾಣಲಿಂಗಿನೋ ಜಂಗಮಲಿಂಗಸ್ಥಲಾನಿ ನವಕಂ ದೀಕ್ಷಾಪಾದೋದಕ ಶಿಕ್ಷಾಪಾದೋದಕ ಜ್ಞಾನಪಾದೋದಕ ಕ್ರಿಯಾನಿಷ್ಪತ್ತಿ ಭಾವ ನಿಷ್ಪತ್ತಿ ಜ್ಞಾನನಿಷ್ಪತ್ತಿ | ಪಿಂಡಕಾಶ ಬಿಂದ್ವಾಕಾಶ ಮಹದಾಕಾಶ ಕ್ರಿಯಾಪ್ರಕಾಶ ಭಾವಪ್ರಕಾಶ ಜ್ಞಾನಪ್ರಕಾಶ ಶರಣಾಸ್ಯ ಪ್ರಸಾದ ಲಿಂಗಸ್ಥಲಾನಿ ದ್ವಾದಶಕಂ ಸ್ವೀಕೃತ ಶಿಷ್ಟೋದನ ಚರಾಚರನಾಸ್ತಿ ಭಾಂಡ ಭಾಜನಾಂಗಲೇಪನ ಸ್ವ ಪರಾಜ್ಞ ಭಾವಭಾವ ವಿನಾಶ ಜ್ಞಾನ ಶೂನ್ಯೇತಿ ಐಕ್ಯಸ್ಯ ಮಹಾಲಿಂಗ ಸ್ಥಲಾನಿ ತತ್ವಮಸಿ: ಇತ್ಯೇಕೊತ್ತರ ಶತಸ್ಥಲಾನಂ ಸಂಜ್ಞಾ ಪ್ರಕ್ರಿಯಸ್ಥಲಮೆನಲೇಂ ಲಿಂಗಮೆನಲೇಂ ಚಿಹ್ನೆಂ. ಆ ಸ್ಥಲದ ನಿರ್ದೇಶಮೆಂತೆನಲ್ ಲೋಕ ದೋಳನಂತ ತತ್ವ ಪ್ರಕರಣಮುಂಟಿದೇನಧಿಕಮೆನಲದಕೇಂ ಸಹಜಮೆ ಕ್ಷೀರ ರಂಭಾಫಲ ಶರ್ಕರೆ ಖಾದ್ಯಮಿರಲಾಜ್ಯಮಿಲ್ಲದದೇನಿನಿದಪ್ಪುದೆ? ಅದು ಕಾರಣದಿಂದ ವಚನಮೆನ್ನಿಂ ನಿರ್ಮಿಸಲ್ಪಟ್ಟಿತ್ತಯ್ಯ ಶಾಂತವೀರೇಶ್ವರಾ