Index   ವಚನ - 13    Search  
 
ಸರ್ವಭೂತಂಗಳಿಗೆ ಸರ್ವ ಲೋಕಂಗಳಿಗೆ ಸರ್ವ ಲೋಕ ಸಂಪತ್ತುಗಳಿಗೆ ಆವುದಾನೊಂದು ಕೇಡಿಲ್ಲದ ಪರಬ್ರಹ್ಮವು ನೆಲೆಯಾಗಿಹುದು ಅದನೆ ಸ್ಥಲವೆಂದು ಹೇಳಿದರು. ಪರಿನಿರ್ವಾಣನಿಷ್ಠರಪ್ಪ ಯೋಗಿಗಳಿಗೆ ಆವುದಾನೊಂದು ತತ್ವವು ಪರಮಾದ್ವೈತ ಲಕ್ಷಣವಹ ಪರಮಪದವಾಗಿ ಇರುತ್ತಿಹುದು ಅದನೆ ‘ಸ್ಥಲ’ ವೆಂದು ಹೇಳಿದರಯ್ಯ ಶಾಂತವೀರೇಶ್ವರಾ ಶ್ರೀ ಶ್ರೀ ಶ್ರೀ