Index   ವಚನ - 14    Search  
 
ಆ ಸ್ಥಲವೆ ತನ್ನ ಶಕ್ತಿಯ ಸ್ಪಂದಾ ಮಾತ್ರದಿಂದ ಲಿಂಗಸ್ಥಲವೆಂದು ಅಂಗಸ್ಥಲವೆಂದು ಎರಡು ತೆರನಾಗಿಹುದು. ಲಿಂಗವ ಉಪಾಧಿಯಿಂದ ಅಂಗದ ಉಪಾಧಿಯಿಂದ ತನ್ನೊಳಗೆ ಒಂದಕ್ಕೊಂದು ಭಿನ್ನವಾಗಿ ತೋರುತ್ತಿಹವು. ಮಹಾದುಪಾದಿ ಬೇದದಿಂದವು ಘಟೋಪಾದಿ ಭೇದದಿಂದವು ಆಕಾಶವು ಹಿಂಗಿ ಮಹಾಕಾಶ ಘಟಾಕಾಶವೆಂದೆರಡು ತೆರನಾಗಿಹುದು. ಹಾಂಗೆ ಸ್ಥಲವು ಲಿಂಗೋಪಾದಿ ಅಂಗೋಪಾದಿ ಭೇದದಿಂದ ಲಿಂಗಸ್ಥಲವೆಂದು ಅಂಗಸ್ಥಲವೆಂದು ಎರಡು ತೆರನಾಗಿ ತೋರುತ್ತಿಹುದಯ್ಯ ಶಾಂತವೀರೇಶ್ವರಾ