Index   ವಚನ - 21    Search  
 
ಅ ಶಕ್ತಿಯ ಒಂದು ಭಾಗ ಲಿಂಗಸ್ಥ[ಲಾಶ್ರಯ]ವಾಗಿಹುದು. ಒಂದು ಭಾಗ ಅಂಗಸ್ಥಲಾಶ್ರಯವಾಗಿಹುದು. ಲಿಂಗಸ್ಥಲವನಾಶ್ರಯಿಸಿದ ಶಕ್ತಿಬಾಗ ಕಳೆ ಎನಿಸಿಕೊಂಡಿತ್ತು. ಅಂಗಸ್ಥಲವನಾಶ್ರಯಿಸಿದ ಶಕ್ತಿಭಾಗ ಭವವ ಕೆಡಿಸುವ ಭಕ್ತಿ ಎನಿಸಿಕೊಂಡಿಹುದಯ್ಯ ಶಾಂತವೀರೇಶ್ವರಾ