ಒಡೆಯರು ಭಕ್ತರಿಗೆ ಸಲುವ ಸಹಪಂಕ್ತಿಯಲ್ಲಿ
ಗುರುವೆಂದು, ಅರಸೆಂದು,
ತನ್ನ ಪರಿಸ್ಪಂದದವರೆಂದು,
ರಸದ್ರವ್ಯವನೆಸಕದಿಂದ ನೀಡಿದೊಡೆ,
ಅದ ನಾನರಿದು ಕೈಕೊಂಡಡೆ
ಕಿಸುಕುಳದ ಪಾಕುಳಕಿಚ್ಚೈಸಿದಂತೆ;
ಅಲ್ಪ ಜಿಹ್ವಾಲಂಪಟಕ್ಕೆ ಸಿಕ್ಕಿದ ಮತ್ಸ್ಯ ಬಂಧನದಿ ಸತ್ತಂತೆ.
ಇದನರಿದು ಭಕ್ತನಾಗಲಿ, ಗುರುವಾಗಲಿ, ಜಂಗಮವಾಗಲಿ,
ಶಿವಗಣಪಂಕ್ತಿಯ ನಡುವೆ ತಾ ಕುಳ್ಳಿರ್ದು
ಮಿಗಿಲಾಗಿ ಷಡುರಸಾನ್ನವಾದಿಯಾದ
ಸುಪದಾರ್ಥಂಗಳನಿಕ್ಕಿಸಿಕೊಂಡು
ತಿಂದನಾದಡೆ ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗಕ್ಕೆ ದೂರ.
Art
Manuscript
Music
Courtesy:
Transliteration
Oḍeyaru bhaktarige saluva sahapaṅktiyalli
guruvendu, arasendu,
tanna parispandadavarendu,
rasadravyavanesakadinda nīḍidoḍe,
ada nānaridu kaikoṇḍaḍe
kisukuḷada pākuḷakiccaisidante;
alpa jihvālampaṭakke sikkida matsya bandhanadi sattante.
Idanaridu bhaktanāgali, guruvāgali, jaṅgamavāgali,
śivagaṇapaṅktiya naḍuve tā kuḷḷirdu
migilāgi ṣaḍurasānnavādiyāda
supadārthaṅgaḷanikkisikoṇḍu
tindanādaḍe ācārave prāṇavāda
rāmēśvaraliṅgakke dūra.