Index   ವಚನ - 32    Search  
 
ಕಂಗಳ ಮುಂದೆ ಕಂಡಂತೆ ಕಾಣಬಹುದೆ ಮನ ನೆನೆದಂತೆ ಆಡಬಹುದೆ? ಕಂಡಕಂಡವರಲ್ಲಿ ಸಂಗವ ಮಾಡಬಹುದೆ? ಅದು ಸ್ವಾನುಭಾವರಿಗೆ ಸಲ್ಲದ ಮತ. ಶಿವಪೂಜಕರಲ್ಲಿ ಶಿವಧ್ಯಾನಮೂರ್ತಿಗಳಲ್ಲಿ, ಶಿವಕಥಾಪ್ರಸಂಗಿಗಳಲ್ಲಿ, ಶಿವಾಧಿಕ್ಯವಲ್ಲದೆ ಪೆರತೊಂದನರಿಯದವರಲ್ಲಿ ತನು ಕರಗಿ, ಮನ ಸಲೆ ಸಂದು, ತ್ರಿವಿಧ ಪ್ರಸಾದದಲ್ಲಿ ಮಹಾಪ್ರಸಾದಿಯಾಗಿ ನಿಂದು ವ್ರತಾಂಗಕ್ಕೆ ಅಭಂಗ ಅವಿರಳನಾಗಿಪ್ಪ ಸದ್ಭಕ್ತನಂಗವೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಸುಖ.