Index   ವಚನ - 29    Search  
 
ಶಕ್ತಿಯೆ ಅಧೋಮುಖಿಯಾಗಿಹುದು ಭಕ್ತಿಯೆ ಊರ್ಧ್ವ ಮೂಖಿಯಾಗಿಹುದು. ಶಕ್ತಿಯೆ ಮಾಯೆಯ ಕೂಡಿಕೊಂಡಿಹುದು ಭಕ್ತಿಯೆ ಮಾಯೆ ವಿರಹಿತವಾಗಿಹುದು ತರ್ಕ ಪ್ರಮಾಣದಿಂದ ನೋಡಲು ಶಕ್ತಿಯಿಂದಲೂ ಭಕ್ತಿಯೆ ಅಧಿಕವಯ್ಯಾ ಶಾಂತವೀರೇಶ್ವರಾ